ಇಲಾಖೆಯ ಚಟುವಟಿಕೆಗಳು:-
ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯು ನಗರ ಮತ್ತು ಗ್ರಾಮಗಳ ಕ್ರಮಬದ್ಧ ಅಭಿವೃದ್ಧಿಗಾಗಿ ಪ್ರಮುಖವಾಗಿ ಮಹಾಯೋಜನೆಗಳನ್ನು ಸಿದ್ಧಪಡಿಸುವ ಮತ್ತು ಅವುಗಳನ್ನು ಜಾರಿಗೊಳಿಸಲು ಮತ್ತು ವಿವಿಧ ಸರ್ಕಾರಿ ಇಲಾಖೆಗಳಿಗೆ/ಸ್ಥಳೀಯ ಸಂಸ್ಥೆಗಳಿಗೆ ಯೋಜನಾ ಅಭಿವೃದ್ಧಿ ಕುರಿತು ತಾಂತ್ರಿಕ ನೆರವು ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಮುಖ್ಯ ಕಾರ್ಯಗಳು ಈ ಕೆಳಕಂಡಂತಿವೆ:
1. ಅಗತ್ಯ ಭೌತಿಕ ಮತ್ತು ಸಾಮಾಜಿಕ-ಆರ್ಥಿಕ ಸಮೀಕ್ಷೆಗಳನ್ನು ನಡೆಸಿದ ನಂತರ ಈ ಯೋಜನೆಗಳಿಗಾಗಿ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961 ರ ಅಡಿಯಲ್ಲಿ ಸರ್ಕಾರದಿಂದ ಅನುಮೋದನೆಯನ್ನು ಪಡೆದ ನಂತರ ನಗರಗಳು, ಪಟ್ಟಣಗಳು ಮತ್ತು ಸಂಭಾವ್ಯ ಗ್ರಾಮಗಳಿಗೆ ಮಹಾಯೋಜನೆಗಳನ್ನು ಸಿದ್ಧಪಡಿಸುವುದು ಹಾಗೂ ಭೌಗೋಳಿಕ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸುವುದು.
2. ಪಟ್ಟಣ ವಿಸ್ತರಣೆ ಯೋಜನೆಗಳು, ಅಭಿವೃದ್ಧಿ/ಸುಧಾರಣಾ ಯೋಜನೆಗಳು, ಪುನರ್ವಸತಿ ಯೋಜನೆಗಳು, ಆಶ್ರಯ ಯೋಜನೆಗಳು ಮತ್ತು ಅಂತಹ ಇತರ ಯೋಜನೆಗಳ ತಯಾರಿಕೆ
3. ರಾಜ್ಯದಲ್ಲಿನ ನಗರ ಮತ್ತು ಗ್ರಾಮಗಳ ಅಭಿವೃದ್ಧಿ ನೀತಿಗಳನ್ನು ರೂಪಿಸಲು ನಗರ ಯೋಜನಾ ಮಂಡಳಿಯ ಮೂಲಕ ಸರ್ಕಾರಕ್ಕೆ ನೆರವು ನೀಡುವುದು ಮತ್ತು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961 ರ ಅಡಿಯಲ್ಲಿ ಹಾಗೂ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ, 1987 ರ ಅಡಿಯಲ್ಲಿ ಮಹಾಯೋಜನೆ ತಯಾರಿಕೆ, ಅನುಷ್ಠಾನ ಮತ್ತು ಜಾರಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಹಾಗೂ ಯೋಜನಾ ಪ್ರಾಧಿಕಾರಗಳಿಗೆ ತಾಂತ್ರಿಕ ನೆರವು ನೀಡುವುದು.
4. ಕರ್ನಾಟಕ ಗೃಹ ಮಂಡಳಿ, ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ, ಕರ್ನಾಟಕ ಕೊಳೆಗೇರಿ ನಿರ್ಮೂಲನಾ ಮಂಡಳಿ ಮತ್ತು ಅಂತಹ ಇತರ ಇಲಾಖೆ/ಮಂಡಳಿಗೆ ಅಭಿವೃದ್ಧಿ ಕುರಿತು ತಾಂತ್ರಿಕ ನೆರವು ನೀಡುವುದು.
5. ಖಾಸಗಿ ವ್ಯಕ್ತಿಗಳು, ಸಂಸ್ಥೆಗಳು, ಸರ್ಕಾರ ಮತ್ತು ಅರೆ-ಸರ್ಕಾರಿ ಇಲಾಖೆಗಳ ವಿನ್ಯಾಸ ಯೋಜನೆಗಳ ತಾಂತ್ರಿಕ ಅನುಮೋದನೆ.
6. ಕೃಷಿ ಭೂಮಿಯನ್ನು ಕೃಷಿಯೇತರ ಬಳಕೆಗೆ ಪರಿವರ್ತಿಸುವ ಕುರಿತು ಕಂದಾಯ ಇಲಾಖೆಗೆ ತಾಂತ್ರಿಕ ಅಭಿಪ್ರಾಯವನ್ನು ಒದಗಿಸುವುದು.
7. ವ್ಯವಸ್ಥಿತ, ದಕ್ಷ ಮತ್ತು ಸುರಕ್ಷಿತ ಸಂಚಾರ ನಿರ್ವಹಣಾ ಯೋಜನೆಗಳನ್ನು ಸಿದ್ಧಪಡಿಸುವುದು ಮತ್ತು ಅದರ ಅನುಷ್ಠಾನಕ್ಕಾಗಿ ಸ್ಥಳೀಯ ಸಂಸ್ಥೆಯ ಅಧಿಕಾರಿಗಳಿಗೆ ತಾಂತ್ರಿಕ ನೆರವು ನೀಡುವುದು.
ಶಾಸನಬದ್ಧ ಕಾರ್ಯಗಳು :-
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961 ಅನ್ನು ರಾಜ್ಯದ 156 ನಗರ ಕೇಂದ್ರಗಳಿಗೆ ವಿಸ್ತರಿಸಲಾಗಿದೆ ಮತ್ತು ಈ ನಗರ ಕೇಂದ್ರಗಳಲ್ಲಿ ಸ್ಥಳೀಯ ಯೋಜನಾ ಪ್ರದೇಶವನ್ನು ಘೋಷಿಸುವ ಮೂಲಕ ಪ್ರಾಧಿಕಾರಗಳನ್ನು ರಚಿಸಲಾಗಿದೆ. ಅದರಂತೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು ಹೊರತುಪಡಿಸಿ, ರಾಜ್ಯದಲ್ಲಿ 32 ನಗರಾಭಿವೃದ್ಧಿ ಪ್ರಾಧಿಕಾರಗಳು ಮತ್ತು 53 ಯೋಜನಾ ಪ್ರಾಧಿಕಾರಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಇತರ 75 ಪಟ್ಟಣಗಳಿಗೆ, ಪುರಸಭೆ/ಪಟ್ಟಣ ಪಂಚಾಯತ್ ಮಿತಿಗಳನ್ನು ಸ್ಥಳೀಯ ಯೋಜನಾ ಪ್ರದೇಶಗಳಾಗಿ ಘೋಷಿಸಲಾಗಿದ್ದು, ಯೋಜನಾ ಪ್ರಾಧಿಕಾರಗಳಾಗಿ ಕಾರ್ಯನಿರ್ವಹಿಸುತ್ತಿವೆ.
ನಗರಾಭಿವೃದ್ಧಿ ಪ್ರಾಧಿಕಾರಗಳು:-
ನಗರಗಳು/ಪಟ್ಟಣಗಳ ಕ್ರಮಬದ್ಧ ಅಭಿವೃದ್ಧಿಗಾಗಿ ಮಹಾಯೋಜನೆಗಳ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರವು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ, 1987 ರ ಅಡಿಯಲ್ಲಿ 32 ನಗರಾಭಿವೃದ್ಧಿ ಪ್ರಾಧಿಕಾರಗಳನ್ನು ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ 1976 ರ ಅಡಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿದೆ. ಕೆಳಗಿನ 32 ನಗರ ಕೇಂದ್ರಗಳಿಗೆ ನಗರಾಭಿವೃದ್ಧಿ ಪ್ರಾಧಿಕಾರಗಳನ್ನು ರಚಿಸಲಾಗಿದೆ.
ಬೆಂಗಳೂರು
ಬೆಳಗಾವಿ
ಬಾಗಲಕೋಟೆ
ಬಳ್ಳಾರಿ
ಬೀದರ್
ವಿಜಯಪುರ
ಚಾಮರಾಜನಗರ-ರಾಮಸಮುದ್ರ
ಚಿತ್ರದುರ್ಗ
ಚಿಕ್ಕಮಗಳೂರು
ದಾವಣಗೆರೆ-ಹರಿಹರ
ಗದಗ-ಬೆಟಗೇರಿ
ಕಲಬುರಗಿ ಹಾಸನ
ಹಾವೇರಿ
ಕಾರವಾರ
ಕೋಲಾರ
ಕೆ.ಜಿ.ಎಫ್.
ಕೊಪ್ಪಳ
ಮಡಿಕೇರಿ
ಮಂಡ್ಯ
ಮಂಗಳೂರು
ಮೈಸೂರು
ರಾಮನಗರ
ರಾಯಚೂರು
ಶಿವಮೊಗ್ಗ-ಭದ್ರಾವತಿ
ತುಮಕೂರು
ಉಡುಪಿ-ಮಲ್ಪೆ
ಹುಬ್ಬಳ್ಳಿ-ಧಾರವಾಡ
ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ವಾಡಾ), ತೋರಣಗಲ್ಲು
ಹೊಸಪೇಟೆ
ಚಿಕ್ಕಬಳ್ಳಾಪುರ
ಯಾದಗಿರಿ
ಈ ಅಭಿವೃದ್ಧಿ ಪ್ರಾಧಿಕಾರಗಳು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ ಯಲ್ಲಿ ಘೋಷಿಸಲಾದ ಆಯಾ ಸ್ಥಳೀಯ ಯೋಜನಾ ಪ್ರದೇಶಗಳಿಗೆ ಯೋಜನಾ ಪ್ರಾಧಿಕಾರಗಳಾಗಿ ಕಾರ್ಯನಿರ್ವಹಿಸುತ್ತಿವೆ. ಸರ್ಕಾರದಿಂದ ಅನುಮೋದಿಸಲಾದ ಮಹಾಯೋಜನೆಗಳ ತಯಾರಿಕೆ ಮತ್ತು ಜಾರಿಗೊಳಿಸುವಿಕೆಗೆ ಯೋಜನಾ ಪ್ರಾಧಿಕಾರವು ಜವಾಬ್ದಾರಿಯಾಗಿರುತ್ತದೆ. ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಹೆಚ್ಚುವರಿ ನಿರ್ದೇಶಕರು / ಜಂಟಿ ನಿರ್ದೇಶಕರು / ಉಪನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರು, ಇವರುಗಳು ಸದಸ್ಯ ಕಾರ್ಯದರ್ಶಿಗಳಾಗಿ (ನಗರ ಯೋಜನಾ ಸದಸ್ಯರು) ಕಾರ್ಯ ನಿರ್ವಹಿಸುತ್ತಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ, 1976 ರ ಅಡಿಯಲ್ಲಿ ರಚಿಸಲಾಗಿದೆ ಮತ್ತು ಈ ಇಲಾಖೆಯ ಅಧಿಕಾರಿಗಳು/ಸಿಬ್ಬಂದಿಗಳು ಮಹಾಯೋಜನೆಗಳ ತಯಾರಿಕೆ ಮತ್ತು ಜಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ವೃಂದದ ಅಧಿಕಾರಿಯು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಗರ ಯೋಜಕ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ, ಮೈಸೂರು, ಮಂಗಳೂರು, ಬಳ್ಳಾರಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಈ ಇಲಾಖೆಯ ಜಂಟಿ ನಿರ್ದೇಶಕರ ವೃಂದದ ಅಧಿಕಾರಿಗಳು ನಗರ ಯೋಜನೆ ಸದಸ್ಯರಾಗಿ ಹಾಗೂ ಉಡುಪಿ, ವಿಜಯಪುರ, ಹೊಸಪೇಟೆ, ಶಿವಮೊಗ್ಗ-ಭದ್ರಾವತಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಉಪ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ಇವರು ನಗರ ಯೋಜನೆ ಸದಸ್ಯರಾಗಿ ಹಾಗೂ ಮಂಡ್ಯ, ಯಾದಗಿರಿ, ಹಾಸನ, ರಾಯಚೂರು ನಗರಾಭಿವೃದ್ಧಿ ಅಧಿಕಾರಿಗಳು, ನಗರ ಮತ್ತು ಗ್ರಾಮಾಂತರ ಸಹಾಯಕ ನಿರ್ದೇಶಕರ ವೃಂದದ ಅಧಿಕಾರಿಗಳು ನಗರ ಯೋಜನೆ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಜಿಲ್ಲೆಯ ಆಯಾ ಶಾಖಾ ಕಚೇರಿಗಳ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರ ವೃಂದದ ಅಧಿಕಾರಿಗಳು ನಗರ ಯೋಜನೆ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇಲಾಖಾ ಕಾಮಗಾರಿಗಳ ಜೊತೆಗೆ ಅಭಿವೃದ್ಧಿ ಪ್ರಾಧಿಕಾರಗಳಲ್ಲಿ ಯೋಜನೆ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ.
ಯೋಜನಾ ಪ್ರಾಧಿಕಾರಗಳು
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961 ರ ಅಡಿಯಲ್ಲಿ ರಚಿತವಾದ ಯೋಜನಾ ಪ್ರಾಧಿಕಾರಗಳು ಪ್ರಸ್ತುತ ಕೆಳಗಿನ ಐವತ್ತಮೂರು 53 ನಗರ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ, ಅವುಗಳೆಂದರೆ;
ಬಾದಾಮಿ
ಮಾಗಡಿ
ಮಾನ್ವಿ
ಚಿತ್ತಾಪುರ
ಬೃಹತ್ ಬೆಂಗಳೂರು ಬಿಡದಿ ಸ್ಮಾರ್ಟ್ ಸಿಟಿ
ಬಾಗಲಕೋಟೆ
ನೆಲಮಂಗಲ
ಹಂಪಿ ವಿಶ್ವ ಪರಂಪರೆ ಪ್ರದೇಶ ಯೋಜನಾ ಪ್ರಾಧಿಕಾರ
ಮಳವಳ್ಳಿ
ಸಿರಾ
ಚೆನೈ-ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್ ಏರಿಯಾ ಯೋಜನಾ ಪ್ರಾಧಿಕಾರ, ತುಮಕೂರು.
ಬಸವಕಲ್ಯಾಣ
ನಿಪ್ಪಾಣಿ
ಆನೇಕಲ್
ಸುರಪುರ
ತಿಪಟೂರು
ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್
ಪ್ರದೇಶ ಯೋಜನಾ ಪ್ರಾಧಿಕಾರ ಪುತ್ತೂರು
ಹೊಸಕೋಟೆ
Sಖಿಖಖ
ಅರಸೀಕೆರೆ
ಚಿಂತಾಮಣಿ
ರಾಣೆಬೆನ್ನೂರು
ಬೇಲೂರು-ಹಳೇಬೀಡು
ಬಂಟ್ವಾಳ
ಲಿಂಗಸುಗೂರು
ಕಾಪು
ಗಂಗಾವತಿ
ರಬಕವಿ-ಬನಹಟ್ಟಿ
ಚನ್ನರಾಯಪಟ್ಟಣ
ಅರಕಲಗೂಡು
ಸೇಡಂ
ಗೋಕಾಕ್
ಸಿರ್ಸಿ
ಕುಶಾಲನಗರ
ವಾಡಿ-ಶಹಾಬಾದ್
ಹುಣಸೂರು
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾ ಸಿಂಧನೂರು
ಮೂಡಬಿದ್ರಿ
ಗೌರಿಬಿದನೂರು
ಮುಧೋಳ
ಜಮಖಂಡಿ
ಶಹಾಪುರ
ಮಾಲೂರು
ಇಳಕಲ್
ರಾಮದುರ್ಗ
ಕನಕಪುರ
ಕೆ.ಆರ್. ನಗರ
ಕುಂದಾಪುರ
ಶಿಡ್ಲಘಟ್ಟ
ಕುಣಿಗಲ್
ಚನ್ನಪಟ್ಟಣ
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ, ನೆಲಮಂಗಲ, ಕನಕಪುರ, ಹೊಸಕೋಟೆ, ಆನೇಕಲ್ ಮತ್ತು ಮಾಗಡಿ ಯೋಜನಾ ಪ್ರಾಧಿಕಾರಗಳು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತದೆ ಮತ್ತು ಆಯಾ ಯೋಜನಾ ಪ್ರಾಧಿಕಾರಗಳಲ್ಲಿ ನಿಯೋಜಿತರಾಗಿರುವ ಈ ಇಲಾಖೆಯ ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕರ ವೃಂದದ ಅಧಿಕಾರಿಯು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಹೆಚ್ಚುವರಿ ನಿರ್ದೇಶಕರ ವೃಂದದ ಅಧಿಕಾರಿಯು ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಪ್ರದೇಶ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಇಲಾಖೆಯ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರ ವೃಂದದ ಅಧಿಕಾರಿಗಳು ಗೋಕಾಕ, ಸಿರಾ, ಚಿತ್ತಾಪುರ, ವಾಡಿ- ಶಹಾಬಾದ ಮತ್ತು ಮಾಲೂರು ಯೋಜನಾ ಪ್ರಾಧಿಕಾರಗಳಿಗೆ ಪೂರ್ಣಾವಧಿ ಸದಸ್ಯ ಕಾರ್ಯದರ್ಶಿಗಳಾಗಿ ನಿಯೋಜನೆಯ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ ಯೋಜನಾ ಪ್ರಾಧಿಕಾರಗಳಿಗೆ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರ ವೃಂದದ ಅಧಿಕಾರಿಗಳು ಸದಸ್ಯ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಇಲಾಖೆಯ ಸಿಬ್ಬಂದಿಗಳು ಮಹಾಯೋಜನೆ ತಯಾರಿಕೆ ಮತ್ತು ಜಾರಿಯಲ್ಲಿ ಯೋಜನಾ ಪ್ರಾಧಿಕಾರಗಳಿಗೆ ಸಹಾಯ ಮಾಡುತ್ತಿದ್ದಾರೆ.
ಮೂಲ: ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯ, ಬೆಂಗಳೂರು, ಕರ್ನಾಟಕ ಸರ್ಕಾರ.